ನನ್ನ ನಿನ್ನ ಪ್ರೇಮಕಥೆ ಮುಕ್ತಾಯ
Posted date: 21 Thu, Apr 2016 – 12:24:56 PM

ಎ.ಬಿ. ಸಿನಿಮಾ ಕ್ರಿಯೇಷನ್ಸ್ ಲಾಂಚನದಡಿಯಲ್ಲಿ ಆನಂದಣ್ಣ ಸಿ.ನ್ಯಾಮಗೌಡ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ನನ್ನ ನಿನ್ನ ಪ್ರೇಮಕಥೆ ಚಿತ್ರದ ಚಿತ್ರೀಕರಣವು ಯಾವುದೇ ಸದ್ದುಗದ್ದಲವಿಲ್ಲದೆ ಸಂಪೂರ್ಣಗೊಂಡಿದೆ.
೫೫ ದಿವಸಗಳ ಕಾಲ ೭ ಗೀತೆಗಳು ಹಲವಾರು ಸನ್ನಿವೇಶಗಳು ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಮೊಹಮದ್ ಹಸೀಬ್ ಛಾಯಾಗ್ರಹಣದಲ್ಲಿ ಜಮಖಂಡಿ, ಬಿಜಾಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ ನಿರ್ದೇಶಕ ಶಿವು ಚಿತ್ರೀಕರಣ ಮುಕ್ತಾಯಗೊಳಿಸಿದರು.
ಚಿತ್ರಕ್ಕೆ ನಗರದಲ್ಲಿ ಮಾತಿನ ಮರುಲೇಪನ ಕಾರ್ಯ ಮುಂದುವರೆದಿದೆ.
ಚಿತಕ್ಕೆ ಮೊಹಮದ್ ಹಸೀಬ್ ಛಾಯಾಗ್ರಹಣ, ಸುಭಾಷ್ ಕಡಕೋಳ್ ಕಲೆ, ಮದನ್ ಹರಿಣಿ ನೃತ್ಯ, ಮಾಸ್ ಮಾದ ಸಾಹಸ, ದಾಮೋಧರ್ ಕಾನಸೂರು ಸಂಕಲನ, ಭರತ್ ನಿರ್ಮಾಣ ನಿರ್ವಹಣೆ ಇದ್ದು, ಚಿತ್ರದ ಕಥೆ, ಸಂಗೀತ ಸಾಹಿತ್ಯ ಶಿವು ಜಮಖಂಡಿ, ಜೋಕರ್ ಹನುಮಂತು ಹಾಗೂ ಧನಂಜಯ್ ಚಿತ್ರದ ಸಹ ನಿರ್ಮಾಪಕರು.
ತಾರಾಗಣದಲ್ಲಿ ವಿಜಯ್ ರಾಘವೇಂದ್ರ, ನಿಧಿ ಸುಬ್ಬಯ್ಯ, ತಿಲಕ್ ಶೇಖರ್, ಸುಧಾ ಬೆಳವಾಡಿ, ಚಿಕ್ಕಣ್ಣ, ರಚನಾ, ಗುರುರಾಜ್ ಹೊಸಕೋಟೆ, ಸಂಗೀತ, ಜೋಕರ್ ಹನುಮಂತು, ಮೂಗೂರ್ ಸುರೇಶ್ ಮುಂತಾದವರಿದ್ದಾರೆ.
ಈ ಚಿತ್ರದ ನಿರ್ಮಾಪಕರು ಪ್ರೇಕ್ಷಕರಿಗೆ ಎರಡು ಸ್ಪರ್ಧೆಗಳಿಗೆ ಭಾಗವಹಿಸಲು ಆಹ್ವಾನ ನೀಡಿದ್ದು, ಅತ್ಯುತ್ತಮ ಪ್ರೇಮ ಪತ್ರ ಬರೆದವರಿಗೆ ನಗದು ರೂ.೨೫,೦೦೦/- ಗಳನ್ನು ಹಾಗೂ ನನ್ನ ನಿನ್ನ ಪ್ರೇಮಕಥೆ ಚಿತ್ರದ ಸಾಹಿತ್ಯಕ್ಕೆ ಅವರದೇ ಶೈಲಿಯಲ್ಲಿ ಸಂಗೀತ ಸಂಯೋಜಿಸಿ ಗೆದ್ದವರಿಗೆ ರೂ.೧,೦೦,೦೦೦/- ನಗದು ಬಹುಮಾನವನ್ನು ಹುಬ್ಬಳ್ಳಿಯಲ್ಲಿ ಮೇ ೨೧ರಂದು ನಡೆಯುವ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ನೀಡಲಿದ್ದಾರೆ.  ವಿವರಗಳಿಗೆ ಎ.ಬಿ. ಸಿನಿಮಾ ಕ್ರಿಯೇಷನ್ಸ್, ನಂ.೯೧೯, ಎ.ಎನ್.ಕೆ. ಎನ್‌ಕ್ಲೇವ್, ಭಾರತ್ ಪೆಟ್ರೋಲ್ ಬಂಕ್ ಹತ್ತಿರ, ಪಾಪರೆಡ್ಡಿಪಾಳ್ಯ, ೫ನೇ ಅಡ್ಡರಸ್ತೆ, ನಾಗರಭಾವಿ ೨ನೇ ಹಂತ, ಬೆಂಗಳೂರು-೫೬೦೦೭೨ ಅಥವಾ
Email:competition@ nnpkcinema.com ಇಲ್ಲಿ ಸಂಪರ್ಕಿಸಬಹುದು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed